Hebrews 1

ದೇವರು ತನ್ನ ಮಗನ ಮೂಲಕ ಮಾತನಾಡಿದ್ದು

1ದೇವರು ಪುರಾತನ ಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ. 2ಆದರೆ
1:2 1 ಪೇತ್ರ. 1:20; ಇಬ್ರಿ. 9:26; ಅ. ಕೃ. 2:17:
ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ
1:2 ಇಬ್ರಿ. 3:6; 4:14; 5:8:
ಮಗನ ಮುಖಾಂತರ ಮಾತನಾಡಿದ್ದಾನೆ.
1:2 ಕೀರ್ತ. 2:8; ಮತ್ತಾ. 21:38; 28:18:
ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ
1:2 ಮೂಲ:ಯುಗಗಳನ್ನು. ಯೋಹಾ. 1:3:
ಇಡೀ ವಿಶ್ವವನ್ನು ಉಂಟುಮಾಡಿದನು.
3ಈತನು ದೇವರ ಮಹಿಮೆಯ ಪ್ರಕಾಶವೂ,
1:3 2 ಕೊರಿ. 4:4:
ಆತನ ವ್ಯಕ್ತಿತ್ವದ ಪ್ರತಿರೂಪವೂ,
1:3 ಇಬ್ರಿ. 11:3; ಕೊಲೊ. 1:17:
ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ
1:3 ಇಬ್ರಿ. 9:14:
ಪಾಪಗಳನ್ನು ಶುದ್ಧೀಮಾಡಿ,
1:3 ಮಾರ್ಕ 16:19; ಲೂಕ 22:69:
ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.

ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು

4ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು.
1:4 ಎಫೆ. 1:21; ಫಿಲಿ. 2:9:
ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು.
5ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?,

<<ನೀನು
1:5 ಕೀರ್ತ. 2:7; ಇಬ್ರಿ. 5:5; ಅ. ಕೃ. 13:33:
ನನ್ನ ಮಗನು,
ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.>>
1:5 2 ಸಮು. 7:14; ಕೀರ್ತ. 89:26,27:
<<ನಾನು ಅವನಿಗೆ ತಂದೆಯಾಗಿರುವೆನು,
ಅವನು ನನಗೆ ಮಗನಾಗಿರುವನು.>>

6
1:6 ಅಥವಾ, ಹಾಗೆ ಹೇಳದೆ ಆತನು ತನ್ನ ಚೊಚ್ಚಲ ಮಗನನ್ನು ಭೂಲೋಕದೊಳಗೆ ಬರಮಾಡುವಾಗ.
ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ

1:6 ಧರ್ಮೋ. 32:43 [ಗ್ರೀಕ್ ಮೂಲ]. ಕೀರ್ತ. 97:7:
<<ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು>> ಎಂದು ಆಜ್ಞಾಪಿಸಿದ್ದಾನೆ.

7ದೇವದೂತರ ವಿಷಯದಲ್ಲಿ,

1:7 ಕೀರ್ತ. 104:4:
<<ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ,
ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ>> ಎಂದು ಹೇಳಿದ್ದಾನೆ.

8ಆದರೆ ಮಗನ ವಿಷಯದಲ್ಲಿಯಾದರೋ,

<<ದೇವರೇ
1:8 ಕೀರ್ತ. 45:6,7:
ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು.
ನೀತಿದಂಡವೇ ನಿನ್ನ ರಾಜದಂಡವಾಗಿದೆ.
9ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ.
ಆದುದರಿಂದ ದೇವರು, ನಿನ್ನ ದೇವರೇ,
ನಿನ್ನನ್ನು ನಿನ್ನ ಜೊತೆಗಾರರಿಗಿಂತ
1:9 ಯೆಶಾ. 61:1,3:
ಅಧಿಕವಾದ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ>> ಎಂದು ಹೇಳಿದ್ದಾನೆ.

10
1:10 ಕೀರ್ತ. 102:25-27:
<<ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ.

ಆಕಾಶವು ನಿನ್ನ ಕೈಕೆಲಸವಾಗಿದೆ,
11ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ.
ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.
12ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು
ಅವು ವಸ್ತ್ರದಂತೆ ಬದಲಾಗುವವು.
1:12 ಇಬ್ರಿ. 13:8:
ನೀನಾದರೂ ಅನನ್ಯನು.
ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ>> ಎಂತಲೂ ಹೇಳುತ್ತಾನೆ.

13ಆದರೆ ಯಾವ ದೇವದೂತನಿಗಾದರೂ ದೇವರು,

1:13 ಕೀರ್ತ. 110:1; ಇಬ್ರಿ. 10:13:
<<ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು>> ಎಂಬುದಾಗಿ ಎಂದಾದರೂ ಹೇಳಿದ್ದಾನೋ?

ಈ ಎಲ್ಲಾ ದೇವದೂತರು ರಕ್ಷಣೆಯನ್ನು
1:14 ಮತ್ತಾ 19:29; 25:34; ರೋಮಾ. 8:17; ಯಾಕೋಬ 2:5; ಪ್ರಕ. 21:7:
ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ
1:14 ಆದಿ. 19:16; ನ್ಯಾಯ. 6:11; ದಾನಿ. 3:28; ಅ. ಕೃ. 12:7:
ಸೇವಕಾತ್ಮಗಳಲ್ಲವೋ?

14

Copyright information for KanULB